ಕರ್ನಾಟಕ ವಿಧಾನಸಭೆಯು ಕರ್ನಾಟಕ ರಾಜ್ಯದ ದ್ವಿ ಶಾಸನ ಸಭೆಯ ಕೆಳಮನೆಯಾಗಿದೆ. ಭಾರತದ ಏಳು ರಾಜ್ಯಗಳ ರಾಜ್ಯ ಶಾಸಕಾಂಗಗಳು ಎರಡು ಮನೆಗಳನ್ನು ಒಳಗೊಂಡಿದೆ. ಅಂತಹ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ವಿಧಾನ ಸಭೆಯನ್ನು ಕೆಳಮನೆ ಎಂದೂ ಮತ್ತು ವಿಧಾನ ಪರಿಷತ್ತನ್ನು ಮೇಲ್ಮನೆ ಎಂದೂ ಕರೆಯಲಾಗುತ್ತದೆ. ವಿಧಾನ ಸಭೆಯ ಸದಸ್ಯರು ನೇರವಾಗಿ ಮತದಾನದ ಮೂಲಕ ಜನರಿಂದ ಚುನಾಯಿತರಾಗುತ್ತಾರೆ. ಕರ್ನಾಟಕ ವಿಧಾನಸಭೆಯಲ್ಲಿ ೨೨೫ ಸದಸ್ಯರಿದ್ದಾರೆ. ಒಬ್ಬ ಸದಸ್ಯನು ಕರ್ನಾಟಕ ರಾಜ್ಯಪಾಲರು ನಾಮಕರಣ ಮಾಡಿದ ಆಂಗ್ಲೋ-ಇಂಡಿಯನ್ ಸಮುದಾಯದ ಪ್ರತಿನಿಧಿಯಾಗಿರುತ್ತಾರೆ. ಶಾಸನಸಭಾ ಸದಸ್ಯರನ್ನು ಆಯ್ಕೆ ಮಾಡಲು ಕರ್ನಾಟಕ ರಾಜ್ಯವನ್ನು ೨೨೪ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಕ್ಷೇತ್ರವು ಒಬ್ಬ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಸದಸ್ಯರನ್ನು ಜನಪ್ರಿಯವಾಗಿ ಎಮ್ಎಲ್ಎಗಳು ಎಂದು ಕರೆಯಲಾಗುತ್ತದೆ. ಸರಳ ಬಹುತ್ವ ಚುನಾವಣಾ ವ್ಯವಸ್ಥೆಯನ್ನು ಬಳಸಿ ವಿಧಾನ ಸಭೆಯನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳನ್ನು ಭಾರತದ ಚುನಾವಣಾ ಆಯೋಗವು ನಡೆಸುತ್ತದೆ. ಸದಸ್ಯರ ಸಾಮಾನ್ಯ ಅವಧಿಯು ಐದು ವರ್ಷಗಳವರೆಗೆ ಇರುತ್ತದೆ. ಮರಣದ ಸಂದರ್ಭದಲ್ಲಿ, ಸದಸ್ಯರ ರಾಜೀನಾಮೆ ಅಥವಾ ಅನರ್ಹತೆ, ಸದಸ್ಯರಿಂದ ನಿರೂಪಿಸಲ್ಪಟ್ಟ ಕ್ಷೇತ್ರಕ್ಕೆ ಉಪ-ಚುನಾವಣೆ ನಡೆಸಲಾಗುತ್ತದೆ. ಬಹುಮತ ಹೊಂದಿರುವ ಪಕ್ಷ ಅಥವಾ ಪಕ್ಷಗಳ ಕೂಟ ಆಡಳಿತ ಪಕ್ಷವು ಆಗುತ್ತದೆ. == ಶಾಸನ ಸಭೆಗಳ ಪಟ್ಟಿ == ರಾಜ್ಯದಲ್ಲಿ ಅಧ್ಯಕ್ಷರ ಆಡಳಿತ ಬುಧವಾರ, ೧೮ ಜೂನ್ ೧೯೫೨ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಹಳೆಯ ಸಾರ್ವಜನಿಕ ಕಛೇರಿ ಕಟ್ಟಡ ಕಾನ್ಫರೆನ್ಸ್ ಸಭಾಂಗಣದಲ್ಲಿ (ಪ್ರಸ್ತುತ ಹೈಕೋರ್ಟ್ ಕಟ್ಟಡ) ಶಾಸನ ಸಭೆಯ ಮೊದಲ ಅಧಿವೇಶನ ನಡೆಯಿತು. ಡಿಸೆಂಬರ್ ೧೬, ೧೯೪೯ ರಂದು ಮೈಸೂರು ಮಹಾರಾಜರು ಪ್ರತಿನಿಧಿ ಸಭೆ ಮತ್ತು ಶಾಸನಸಭೆಯನ್ನು ವಿಸರ್ಜಿಸಿದರು. ೧೯೪೭ರಲ್ಲಿ ರಚನೆಯಾದ ಸಂಸತ್ ಸಭೆಯು ೧೯೫೨ರಲ್ಲಿ ಚುನಾವಣೆ ನಡೆಯುವವರೆಗೂ ತಾತ್ಕಾಲಿಕವಾಗಿ ಮೈಸೂರಿನ ಸಭೆಯಾಗಿತು. ಸಂವಿಧಾನದ ಅಡಿಯಲ್ಲಿ ರಚಿಸಲಾದ ಮೊದಲ ಸಭೆಯಲ್ಲಿ 99 ಚುನಾಯಿತರು ಮತ್ತು ಒಬ್ಬ ನಾಮನಿರ್ದೇಶನಗೊಂಡ ಸದಸ್ಯರಿದ್ದರು. ಸಭೆಯ ಮೊದಲ ಸಭೆಯಲ್ಲಿ, ವಿ. ವೆಂಕಟಪ್ಪ ಅವರು ಗೌರವಾನ್ವಿತ ಸಭಾಧ್ಯಕ್ಷರಾಗಿದ್ದರು, ನಂತರ ಅವರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಇತರೆ ಸದಸ್ಯರಿಗೆ ಪ್ರಮಾಣ ವಚನ ನೀಡಿದರು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಹಾಗು ಎಚ್. ಸಿದ್ದಯ್ಯ ಸಭಾಧ್ಯಕ್ಷ ಹುದ್ದೆಯ ಚುನಾವಣೆಗೆ ಸ್ಪರ್ಧಿಸಿದ್ದರು, ಆ ಚುನಾವಣೆಯಲ್ಲಿ ಸಿದ್ದಯ್ಯ ಅವರು 74 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು ಮತ್ತು ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಭಾಷಣ ಮಾಡಿದರು. 1953 ರಲ್ಲಿ ಆಂಧ್ರ ರಾಜ್ಯದ ರಚನೆಯೊಂದಿಗೆ, ಮದ್ರಾಸ್ ರಾಜ್ಯದಿಂದ ಬಳ್ಳಾರಿ ಜಿಲ್ಲೆಯ ಭಾಗಗಳು ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು ಮತ್ತು ಶಾಸನ ಸಭೆಯ ಬಲವು ಐದು ಸದಸ್ಯರಿಂದ ಹೆಚ್ಚಿಸಲ್ಪಟ್ಟಿತು. ಮೈಸೂರು ರಾಜ್ಯದ ಮರು-ಸಂಘಟನೆಯು ೧ ನವೆಂಬರ್ ೧೯೫೬ ರಂದು ಹಿಂದಿನ ಬಾಂಬೆ ರಾಜ್ಯದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ರಾಜ್ಯದ ಮೂರು ಜಿಲ್ಲೆಗಳು, ಹಳೆಯ ಮದ್ರಾಸ್ ರಾಜ್ಯದ ಕೊಡಗು ಮತ್ತು ಮೈಸೂರು ಸಂಸ್ಥಾನದ ಒಂದು ಜಿಲ್ಲೆ ಮತ್ತು ಒಂದು ತಾಲ್ಲೂಕನ್ನು ಸೇರಿಸಲಾಯಿತು. ರಾಜ್ಯವನ್ನು ೧೯೭೩ ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೊಸ ವಿಧಾನಸಭೆಯ ಮೊದಲ ಅಧಿವೇಶನ ೧೯೫೬ರ ಡಿಸೆಂಬರ್ ೧೯ ರಂದು ಹೊಸದಾಗಿ ನಿರ್ಮಾಣವಾದ ವಿಧಾನ ಸೌಧದಲ್ಲಿ ನಡೆಯಿತು. ೧೯೫೭ರಲ್ಲಿ ಇದ್ದ ೨೦೮ ಶಾಸಕರ ಸಂಖ್ಯೆಯು ೧೯೬೭ರಲ್ಲಿ ೨೧೬ ಕ್ಕೆ ಏರಿತು ಮತ್ತು ೧೯೭೮ರಲ್ಲಿ ೨೨೪ ಏರಿತು ಹಾಗು ಒರ್ವ ನಾಮ ನಿರ್ದೇಶಿತರನ್ನು ಸೇರಿಸಲಾಯಿತು. ಕರ್ನಾಟಕ ವಿಧಾನ ಸಭೆಯ ಏಕೈಕ ಮಹಿಳಾ ಸಭಾಧ್ಯಕ್ಷರಾಗಿ ಕೆ.ಎಸ್. ನಾಗರತ್ನಮ್ಮನವರು ೨೪ ಮಾರ್ಚ್ ೧೯೭೨ ರಿಂದ ೩ ಮಾರ್ಚ್ ೧೯೭೮ ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಬಜೆಟ್ ಅಧಿವೇಶನ ಮತ್ತು ಶಾಸನಸಭೆಯ ಮುಂಗಾರು ಅಧಿವೇಶನವನ್ನು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲಾಗುತ್ತದೆ. ಶಾಸನಸಭೆಯ ಚಳಿಗಾಲದ ಅಧಿವೇಶನವು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತದೆ. == ಸಭಾಧ್ಯಕ್ಷರ ಪಟ್ಟಿ == == ಸಭಾಧ್ಯಕ್ಷರ ಅಧಿಕಾರಗಳು, == ಲೆಕ್ಕಪತ್ರ ಸಮಿತಿಯ ನಡೆಗೆ ತಡೆಯೊಡ್ಡಿದ ಕ್ರಮ ತರವೇ?;ಸಂಪಾದಕೀಯ;: 30 ಮೇ 2020 === ಹೆಚ್ಚಿನ ಮಾಹಿತಿ === ಗತಿಬಿಂಬ: ಎಂದೆಂದೂ ಮುಗಿಯದ ಕತೆ;ವೈ.ಗ.ಜಗದೀಶ್‌ : 16 ಏಪ್ರಿಲ್ 2021//ಬಿಜೆಪಿ ಅಧಿಕಾರದಲ್ಲಿದ್ದಾಗ ಇದು() ಸಾಮಾನ್ಯ ಎಂಬಷ್ಟರ ಮಟ್ಟಿಗೆ ವ್ಯಾಜ್ಯ ರಾಜಕಾರಣ ಕಾಣಿಸ ತೊಡಗಿದೆ. ಇದು ಬಿಜೆಪಿಯ ಜಾಯಮಾನವೇ ಅಥವಾ ಚಾರಿತ್ರ್ಯವೇ ಎಂಬ ಸಂಶಯವೂ ಮೊಳೆಯುತ್ತಿದೆ. == ಉಲ್ಲೇಖಗಳು == ಕರ್ನಾಟಕ ಲೋಕಸಭಾ ಚುನಾವಣೆ 2019 ಫಲಿತಾಂಶ ವೆಬ್ಸೈಟ್ 2019-04-18 ವೇಬ್ಯಾಕ್ ಮೆಷಿನ್ ನಲ್ಲಿ.